ಅಣ್ಣ ತಮ್ಮಂದಿರು ಬಿಡುಗಡೆ ಇಲ್ಲ!
Send us your feedback to audioarticles@vaarta.com
ಇದೇನಪ್ಪ ಈ ಸಿನೆಮಾದ ಹೆಸರು ಕೇಳಿದ್ದೇವೆ ಆದರೆ ಸಿನೆಮಾ ಯಾವಾಗ ಬಂತು ಅಂತ ಯೋಚನೆ ಬಂದಿತೆ. ಇಲ್ಲ ಅಣ್ಣ ತಮ್ಮಂದಿರು ಸಿನೆಮಾ ಡಾಕ್ಟರ್ಶಿವರಾಜಕುಮಾರ್, ಶ್ರೀ ನಗರ ಕಿಟ್ಟಿ ಹಾಗೂ ಯೋಗೀಶ್ ಅಭಿನಯದ ಸಿನೆಮಾ ಇನ್ನ ಸಧ್ಯಕ್ಕೆ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.
ಆದರೆ ಈ ಅಣ್ಣ ತಮ್ಮಂದಿರುಗಳಿಗೆ ತಮ್ಮ ಜನುಮ ದಿನಕ್ಕೆ ಯಾವುದೇ ಬಿಡುಗಡೆ ಸಾಧ್ಯ ಆಗುತ್ತಿಲ್ಲ. ಜೂಲೈ ಆರು ಯೋಗೀಶ್ ಜನುಮದಿನ. ಅಂದು ಅವರ ಕಾಲ ಭೈರೇಶ್ವರ ಸಿದ್ದವಿದ್ದರು ಬಿಡುಗಡೆ ಆಗುತ್ತಿಲ್ಲ. ಅವರ ಮತ್ತೊಂದು ಸಿನೆಮಾದ ಘೋಷಣೆ ಆಗಲಿದೆ.
ಜೂಲೈ 9 ಶ್ರೀ ನಗರ ಕಿಟ್ಟಿ ಅವರ ಜನುಮದಿನ. ಅಂದು ಅವರ ಬಹುಪರಾಕ್ ಬಿಡುಗಡೆ ಸಿದ್ದವಿದ್ದರು ಭಾಗ್ಯ ಬಿಡುಗಡೆಗೆ ಇಲ್ಲ. ಅವರ ಸಿನೆಮಾದ ಟ್ರೈಲರ್ ಬಿಡುಗಡೆ ಆಗುತ್ತಿದೆ ಒಂದು ದಿವಸದ ಮುಂಚೆ. ಶ್ರೀ ನಗರ ಕಿಟ್ಟಿ ಅವರು ಶಂಕ್ರ, ಸುಬ್ರಮಣಿ, ದ್ರೋಹ ಚಿತ್ರಗಳು ಕೈಯಲ್ಲಿ ಇದೆ. ಅಂದು ಇನ್ನಷ್ಟು ಸಿನೆಮಗಳು ಶುರು ಆಗುವ ಜಾಹೀರಾತು ಬರಲಿದೆ.
ಇವೃಬ್ಬರ ಅಣ್ಣ ಶಿವಣ್ಣ ಅರ್ಥಾತ್ ಡಾಕ್ಟರ್ ಶಿವರಾಜಕುಮಾರ್ ಆರು ಸಿನೆಮಗಳು ಒಂದರ ಹಿಂದಿ ಇದೆ. ಆರ್ಯನ್ ಬಿಡುಗಡೆಗೆ ನಿಂತಿದೆ ಆದರ ಜೂಲೈ 12 ಡಾಕ್ಟರ್ ಶಿವಣ್ಣ ಜನುಮದಿನ ಅದು ಬಿಡುಗಡೆ ಆಗದೆ ಜೂಲೈ 18 ಎಂದು ಈಗ ನಿಗದಿ ಆಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ಡಾಕ್ಟರ್ ಶಿವರಾಜಕುಮಾರ್ ಅವರೇ ಅತಿ ಹೆಚ್ಚು ಸಿನೆಮಗಳಲ್ಲಿ ಅಭಿನಯ ಮಾಡುತ್ತಿರುವುದು.
ಈವಿಷ್ಟೂ ಮೂವರ ನಟರುಗಳ ವಿಷಯ ಆದರೆ, ಜೂಲೈ 2ರಂದು ಗೋಲ್ಡನ್ ಸ್ಟಾರ್ ಜನುಮದಿನ, ಜೂಲೈ 4 ಪ್ರಜ್ವಲ್ ದೇವರಾಜ್ ಅವರ ಜನುಮದಿನ ಅಂದು ಸಹ ಆಯಾ ನಟರುಗಳ ಸಿನೆಮಗಳು ಬಿಡುಗಡೆ ಆಗಲಿಲ್ಲ.
Follow us on Google News and stay updated with the latest!
-
Contact at support@indiaglitz.com
Comments